Sunday, November 3, 2013

Prayer to Lakshmi Devi

This is a wonderful prayer which I saw on FB if you are interested you can check out the same at this website and I guess google provides translations too
ಶ್ರೀ ಲಕ್ಷ್ಮೀದೇವಿಗೆ ಮಾಡುವ ಪ್ರಾರ್ಥನೆ ದೀಪಾವಳಿಯ ಲಕ್ಷ್ಮೀಪೂಜೆಯ ಸಮಯದಲ್ಲಿ ಸಂಪೂರ್ಣ ವರ್ಷದ ಜಮಾ-ಖರ್ಚಿನ ಲೆಕ್ಕಾಚಾರದ ಪುಸ್ತಕವನ್ನು ಲಕ್ಷ್ಮೀಯ ಮುಂದಿಟ್ಟು ಶ್ರೀ ಲಕ್ಷ್ಮೀದೇವಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು, ‘ಹೇ ಲಕ್ಷ್ಮೀ, ನಿನ್ನ ಆಶೀರ್ವಾದದಿಂದ ದೊರೆತ ಧನವನ್ನು ನಾವು ಸತ್ಕಾರ್ಯಕ್ಕಾಗಿ ಮತ್ತು ಈಶ್ವರೀಕಾರ್ಯವೆಂದು ಉಪಯೋಗಿಸಿದ್ದೇವೆ. ಅದನ್ನು ತಾಳೆ ಮಾಡಿ ನಿನ್ನ ಮುಂದಿಟ್ಟಿದ್ದೇವೆ. ಅದಕ್ಕೆ ನಿನ್ನ ಒಪ್ಪಿಗೆಯಿರಲಿ. ಮುಂದಿನ ವರ್ಷವೂ ನಮ್ಮ ಕಾರ್ಯವು ವ್ಯವಸ್ಥಿತವಾಗಿ ಪೂರ್ಣಗೊಳ್ಳಲಿ. ನನ್ನ ಪಾಲನೆಪೋಷಣೆಗಾಗಿ ಚೈತನ್ಯವನ್ನು ನೀಡುವ, ನನ್ನ ಪ್ರತಿಯೊಂದು ಕಾರ್ಯದಲ್ಲಿ ಸಹಭಾಗಿಯಾಗಿರುವ ಭಗವಂತನು ನನ್ನಲ್ಲಿದ್ದು ಕಾರ್ಯವನ್ನು ಮಾಡುತ್ತಾನೆ. ಆದ್ದರಿಂದ ಅವನೂ ಈ ಹಣದಲ್ಲಿ ಪಾಲುದಾರನಾಗಿದ್ದಾನೆ. ನಾನು ಇಡೀ ವರ್ಷದಲ್ಲಿ ಎಷ್ಟು ಹಣವನ್ನು ಗಳಿಸಿದೆನು ಮತ್ತು ಅದನ್ನು ಹೇಗೆ ಉಪಯೋಗಿಸಿದೆನು, ಎಂಬುದರ ಸಂಪೂರ್ಣ ಲೆಕ್ಕಾಚಾರವನ್ನು ಈ ಜಮಾ-ಖರ್ಚಿನ ಪುಸ್ತಕದಲ್ಲಿ ನಮೂದಿಸಲಾಗಿದೆ. ಇಂದು ಅದನ್ನು ತಪಾಸಣೆಗಾಗಿ ನಿನ್ನ ಮುಂದೆ ಇಡಲಾಗಿದೆ. ನೀನು ಸಾಕ್ಷಿಯಾಗಿರುವಿ. ನಿನ್ನಿಂದ ನಾನು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ. ನೀನು ನನ್ನ ಬಳಿ ಬಂದಾಗಿನಿಂದ ನಿನ್ನ ಗೌರವವನ್ನೇ ಮಾಡಿದ್ದೇನೆ. ನಿನ್ನ ವಿನಿಯೋಗವನ್ನು ಪ್ರಭುಕಾರ್ಯಕ್ಕಾಗಿಯೇ ಮಾಡಲಾಗಿದೆ; ಏಕೆಂದರೆ ಅದರಲ್ಲಿ ಪ್ರಭುವಿನ ಪಾಲೂ ಇದೆ. ಹೇ ಲಕ್ಷ್ಮೀದೇವೀ, ನೀನು ಸ್ವಚ್ಛ ಮತ್ತು ನಿಷ್ಕಳಂಕಳಾಗಿರುವಿ, ಆದ್ದರಿಂದ ನಾನು ನಿನ್ನನ್ನು ಕೆಟ್ಟ ಕೆಲಸಗಳಿಗೆ ಎಂದೂ ಉಪಯೋಗಿಸಲಿಲ್ಲ. ಇದೆಲ್ಲವೂ ನನಗೆ ಶ್ರೀ ಸರಸ್ವತೀದೇವಿಯು ಮಾಡಿದ ಸಹಾಯದಿಂದಾಗಿ ಸಾಧ್ಯವಾಯಿತು. ಅವಳು ಎಂದಿಗೂ ನನ್ನ ವಿವೇಕವನ್ನು ಕಡಿಮೆಯಾಗಲು ಬಿಡಲಿಲ್ಲ. ಆದ್ದರಿಂದ ನನ್ನ ಆತ್ಮಬಲವು ಕಡಿಮೆಯಾಗಲಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಸುಖ ಮತ್ತು ಸಮಾಧಾನವು ಲಭಿಸಿತು. ನಾನು ಪ್ರಭುವಿನ ಸ್ಮರಣೆಯನ್ನಿಟ್ಟೇ ಈ ಖರ್ಚನ್ನು ಮಾಡಿದ್ದೇನೆ; ಅವನನ್ನು ಸಹಭಾಗಿ ಮಾಡಿಕೊಂಡಿದ್ದರಿಂದ ಅವನ ಸಹಾಯವೂ ದೊರೆಯಿತು. ‘ಒಂದು ವೇಳೆ ನಾನು ನಿನ್ನ ವಿನಿಯೋಗವನ್ನು ಯೋಗ್ಯ ರೀತಿಯಲ್ಲಿ ಮಾಡದಿದ್ದಲ್ಲಿ ನೀನು ನನ್ನನ್ನು ಬಿಟ್ಟು ಹೋಗುವೆ’, ಎಂಬುದರ ಅರಿವನ್ನು ನಾನು ಸತತವಾಗಿಟ್ಟುಕೊಳ್ಳುತ್ತೇನೆ. ಆದ್ದರಿಂದ ಹೇ ಲಕ್ಷ್ಮೀದೇವೀ, ನನ್ನ ಖರ್ಚಿಗೆ ಅನುಮತಿ ಕೊಡಲು ನೀನು ಭಗವಂತನ ಬಳಿ ನನ್ನ ಶಿಫಾರಸ್ಸು ಮಾಡು; ಏಕೆಂದರೆ ನಿನ್ನ ಶಿಫಾರಸ್ಸಾಗದೇ ಅವನು ಅದನ್ನು ಮನ್ನಿಸುವುದಿಲ್ಲ. ನನಗೆ ಏನಾದರೂ ತಪ್ಪುಗಳು ಕಂಡುಬಂದಲ್ಲಿ ಇನ್ನು ಮುಂದೆ ನಾನು ತಪ್ಪುಗಳಾಗದಂತೆ ನೋಡಿಕೊಳ್ಳುತ್ತೇನೆ. ಆದ್ದರಿಂದ ಹೇ ಲಕ್ಷ್ಮೀದೇವಿ ಮತ್ತು ಹೇ ಸರಸ್ವತೀದೇವಿ, ನೀವು ನನ್ನ ಮೇಲೆ ಕೃಪೆ ಮಾಡಿರಿ ಮತ್ತು ನನ್ನಿಂದ ಇಡಿ ಜನ್ಮದಲ್ಲಿ ಹಣದ ಹಿತಕಾರಕ ವಿನಿಯೋಗವೇ ಆಗಲಿ. (ಆಧಾರ: ಸನಾತನ ಸಂಸ್ಥೆಯ ಗ್ರಂಥ 'ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು') 

Original Post from: http://dharmagranth.blogspot.in/2012/11/Lakshmidevi.Prarthane.html
© Sanatan Sanstha - All Rights Reserved



Shri Lakshmi Devi puja is done on Deepawali newmoon day in the evening and on that day  whole years financial transactions book is kept in front of Shri Laksmidevi  and pray her ... One satvic way of praying is thus...
     "Hey Lakshmi Devi with With your blessings the earnings that I have  earned I have used for good deeds both for material and divine purposes and I have accounted it and kept infront of you... please Bless me that... Next year too my work is done with same efficiency... God is the one who granted me with energy to look after my family and in everydeed I do so He is also stakeholder in my earnings... I have accounted my spendings and earnings of the whole year in this ledger book which I have kept in front of you.. You are my witness because it is impossible to hide anything from you... Eversince you came to me..(Money is considered as Shri Lakshmi Devi in India ) I have always treated you with utmost respect... I have spent this on duty towards my lord (prabhu karya) because lord too has some rights on it... Hey Devi you are pure and chaste and so I have not spent even apenny on bad deeds this possible because of Shri Sarawathi Devis grace (Intellect  is considered as Shri Saraswathi Devi in India)

           She (Saraswathi Devi) never let my intellect drop to low and thus my soul power (atmabala) didnt decrease... (Soul power is said to be behind everyones action and said to increase with good actions and decrease with bad/evil actions)) Hence there is happiness and peace in my family... I have  spent this on lordly work taking him into account... Since he is my partner in thisearning  he has helped me too....
      Suppose if I misused you... I know that "you wont tolerate misuse and you will leavre me then and there" and this I kept as constant reminder... So Lakshmi Devi please grant me permission to my expenditures and recommend the same with God because without your approval He wont accept...
    If I spot any mistakes .. I will assure that I will not repeat them ...
   So please Shri Lakshmi Devi and Shri Saraswathi Devi bless me that through  out my whole life I spend money judiciously...

( Source: Sanathana Samsthe book " Habba, Dharmika utsava maththu vrathagalu)




http://dharmagranth.blogspot.in/2012/11/Lakshmidevi.Prarthane.html

There are still more interesting stuff about our Dharma....you can check this wonderful blog....

No comments:

Post a Comment