Friday, January 12, 2024

ಕುಂಕುಮ ಮಾಡುವ ವಿಧಾನ

 ಶುದ್ಧ ಕುಂಕುಮ ತಯಾರಿಸುವ ವಿಧಾನ : :


ತುಂಬಾ ಜನ ಅಕ್ಕ - ತಂಗಿಯರು ಕುಂಕುಮ ಮಾಡುವ ರೀತಿ ಹೇಗೆಂದು ಕೇಳುತ್ತಿದ್ದರು. ಹಾಗಾಗಿ ನನಗೆ ತಿಳಿದ ಕ್ರಮವನ್ನು ಅಪೇಕ್ಷಿತರಿಗಾಗಿ ಬರೆಯುತ್ತಾ ಇದ್ದೇನೆ..


ಬೇಕಾಗುವ ಸಾಮಗ್ರಿಗಳು:


ಒಳ್ಳೆ ಜಾತಿಯ ಅರಿಶಿನ ಕೋಡು ಒಂದು ಕಿಲೊ 

ಬಿಳಿಗಾರ * 150ಗ್ರಾಂ

ಸ್ಪಟಿಕ* 10 ಗ್ರಾಂ 

ನಿಂಬೆಹುಳಿಯ ರಸ 750 ಮಿಲಿಲೀಟರು {ಮುಕ್ಕಾಲು ಲೀ, ಬೀಜ ತೆಗೆದು ಸೋಸಿದ್ದು}

ಊರ ದನದ ತುಪ್ಪ100ಗ್ರಾಂ

ಒಂದು ಪ್ಲಾಸ್ಟಿಕ್ ಶೀಟ್ { ಚಾಪೆಯೂ ಆಗಬಹುದು}


ಇಷ್ಟು ಸಾಮಾನುಗಳನ್ನು ತುಂಬಬಹುದಾದ ಒಂದು ಪಾತ್ರೆ. {ಪಿಂಗಾಣಿಯದ್ದೋ, ಮಣ್ಣಿನದ್ದೋ ಆದರೆ ಒಳ್ಳೆದು.ಅದು ಸಿಕ್ಕದೆ ಇದ್ದರೆ ಸ್ಟೀಲ್ ಪಾತ್ರೆ. ಅಗಲ ಬಾಯಿದಾದರೆ ಪಾಕವನ್ನು ಗೋಟಾಯಿಸಲು ಸುಲಭ.}


ಕುಂಕುಮ ತಯಾರಿಕೆಯ ವಿಧಾನ :


ಶುದ್ಧವಾದ ಅರಿಶಿನ ಕೋಡನ್ನು ತೊಳೆದು ಸಣ್ಣ-ಸಣ್ಣ ತುಂಡುಮಾಡಿಗೊಳ್ಳಬೇಕು. ಮತ್ತೆ ಸ್ಪಟಿಕವನ್ನೂ ಬಿಳಿಗಾರವನ್ನೂ ನುಣ್ಣಗೆ ಪುಡಿ ಮಾಡಿಕೊಂಡು, ನಿಂಬೆಹುಳಿಯ ರಸದಲ್ಲಿ ಸರಿಯಾಗಿ ಕಲಸಿ ಅದಕ್ಕೆ ಅರಿಶಿನ ಹೋಳುಗಳನ್ನ ಹಾಕಿ ಸರಿಯಾಗಿ ಮಿಶ್ರಮಾಡಬೇಕು.


ಈ ಮಿಶ್ರಣವನ್ನು, ಪಾತ್ರೆಯಲ್ಲಿ ಎರಡು ದಿನ {ಅರಿಶಿನ ತುಂಡು ನಿಂಬೆಹುಳಿ ರಸ ಹೀರುವುದಕ್ಕೆ ಇಡಬೇಕು. ದಿನಕ್ಕೆ ಏಳೆಂಟು ಸರ್ತಿ ಅದನ್ನು ಸೌಟುಹಾಕಿ ಗೋಟಾಯಿಸಬೇಕು.)


ಎರಡು ದಿನ ಬಿಟ್ಟು ಪ್ಲಾಸ್ಟಿಕ್ ಶೀಟಿನಲ್ಲಿ ಹರವಿ ಮನೆ ಒಳಗೆ ಒಣಗಿಸಬೇಕು. ಇದು ಸಾದಾರಣ ಹದಿನೈದು ದಿನ ಒಣಗಿದ ಮೇಲೆ ನುಣ್ಣಗೆ ಪುಡಿ ಮಾಡಿ, ಜರಡಿಯಾಡಿಸಬೇಕು. ಕೊನೆಗೆ ತುಪ್ಪ ಹಾಕಿ ಚೆನ್ನಾಗಿ ಕೈಯಲ್ಲಿ ತಿಕ್ಕಿ,ತಿಕ್ಕಿ ಹದ ಮಾಡಬೇಕು. ಇದೀಗ ಶುದ್ಧ ಕುಂಕುಮ ರೆಡಿ.


ಇದು ಸರಿಯಾದ ಕುಂಕುಮ. ಒಳ್ಳೆ ಬಣ್ಣ ಹೊಂದಿದ್ದು, ತುಂಬಾ ಸಮಯಕ್ಕೆ ಬಾಳಿಕೆ ಬರುತ್ತದೆ. ಮಾತ್ರ ಅಲ್ಲ, ಮನುಷ್ಯನ ಭ್ರೂಮಧ್ಯಕ್ಕೆ ಹಾಕಿದರೆ ಆರೋಗ್ಯದಾಯಕ. ಶೀತ ಆದ ಪುಟ್ಟ ಮಕ್ಕಳಿಗೂ ನೆತ್ತಿಗೆ ಹಾಕಿ ತಿಕ್ಕಿದರೆ ಒಂದೇ ದಿನದಲ್ಲಿ ಮೂಗಿನಲ್ಲಿ ಹರಿವ ಸಿಂಬಳವೂ ನಿಲ್ಲುತ್ತದೆ.


* ಸ್ಪಟಿಕ ಹಾಗೂ ಬಿಳಿಗಾರ (ಬಿಳಿಯಾಗಿ ಇಂಗಿನ ಗಟ್ಟಿಯಂತಿದೆ). ಇವುಗಳು ಆಯುರ್ವೇದ ಔಷಧಿ ಮಾರುವ ಅಂಗಡಿಯಲ್ಲಿ ಸಿಗುತ್ತದೆ. ಬಿಳಿಗಾರ (ಬೋರಾಕ್ಸ್) – ಪಟಿಕ (ಆಲಮ್) ಎಂದರೆ ದ್ವಿಲವಣಗಳ ಒಂದು ನಿರ್ದಿಷ್ಟ ಗುಂಪು.




ಕೃಪೆ ವಾಟ್ಸಪ್

No comments:

Post a Comment